ಲಲಿತ್ ಜೆ. ರಾವ್
Lalit.J.Rao.jpg
ಹಿನ್ನೆಲೆ ಮಾಹಿತಿ
ಜನ್ಮ ನಾಮಲಲಿತ್ ರಾವ್
ಜನನ೬ ನವೆಂಬರ್ ೧೯೪೨
ಮೂಲಸ್ಥಳಬೆಂಗಳೂರು, ಕರ್ನಾಟಕ, ಭಾರತ
ಶೈಲಿ/ಗಳುಭಾರತೀಯ ಶಾಸ್ತ್ರೀಯ ಸಂಗೀತ‌
ವೃತ್ತಿಗಳುಎಂಜಿನಿಯರ್,ಗಾಯಕಿ

ಲಲಿತ್ ಜೆ. ರಾವ್ (ಜನನ ೬ ನವೆಂಬರ್ ೧೯೪೨)ರವರು ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಆಗ್ರಾ ಘರಾನಾ (ಹಾಡಿನ ಶೈಲಿ) ಪ್ರತಿನಿಧಿ.

ಪರಿವಿಡಿ

  • ಜನನ
  • ಆರಂಭಿಕ ಜೀವನ
  • ವೃತ್ತಿಜೀವನ
  • ಪ್ರಶಸ್ತಿಗಳು
  • ಉಲ್ಲೇಖಗಳು

ಜನನ[ಬದಲಾಯಿಸಿ]

ರಾವ್ ರವರು ೬ ನವೆಂಬರ್ ೧೯೪೨ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.[೧]

ಆರಂಭಿಕ ಜೀವನ[ಬದಲಾಯಿಸಿ]

ರಾವ್ ರವರು ತನ್ನ ಮೂರನೇ ವಯಸ್ಸಿನಲ್ಲಿ ಆಗ್ರಾ ಘರಾನಾ ಗಾಯಕ ಉಸ್ತಾದ್ ಫಯಾಜ್ ಖಾನ್ ರವರ ಸಂಗೀತಗೋಷ್ಠಿಯಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಪರಿಚಯವಾದರು. ಅವರು ರಾಮಾ ರಾವ್ ನಾಯ್ಕ ರಿಂದ ಸಂಗೀತವನ್ನು ಕಲಿಯಲು ಆರಂಭಿಸಿದರು ಮತ್ತು ೧೨ನೇ ವಯಸ್ಸಿನಲ್ಲಿ ಬೆಂಗಳೂರಿನ ಸಂಗೀತ ಸಭೆಯಲ್ಲಿ ತನ್ನ ಮೊದಲ ಸಂಗೀತ ಕಚೇರಿಯನ್ನು ಪ್ರದರ್ಶಿಸಿದರು. ತನ್ನ ೧೪ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಡೆದ ಆಲ್ ಇಂಡಿಯಾ ಕ್ಲಾಸಿಕಲ್ ಮ್ಯೂಸಿಕ್ ಸ್ಪರ್ಧೆಯನ್ನು ಗೆದ್ದರು.[೨]

ವೃತ್ತಿಜೀವನ[ಬದಲಾಯಿಸಿ]

ರಾವ್ ರವರು ಖ್ಯಾಲ್, ಧ್ರುಪದ್, ಧಮಾರ್, ಠುಮ್ರಿ, ತರಣ ಮತ್ತು ಹರಿ ಹಾಡುವುದರಲ್ಲಿ ಪ್ರವೀಣರಾಗಿದ್ದಾರೆ. ಅವರು ಫ್ರಾನ್ಸ್, ಯುಕೆ, ಯುಎಸ್ ಮತ್ತು ಕೆನಡಾದಲ್ಲಿ ಸಂಗೀತ ಕಚೇರಿಯನ್ನು ಪ್ರದರ್ಶಿಸಿದ್ದಾರೆ ಮತ್ತು ಅಖಿಲ ಭಾರತ ರೇಡಿಯೋದ ಉನ್ನತ ದರ್ಜೆಯ ಕಲಾವಿದರಾಗಿದ್ದಾರೆ. ರಾವ್ ರವರು ನಿಯಮಿತವಾಗಿ ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರದರ್ಶನ ನೀಡುತ್ತಾರೆ. "ಸಜನ್ ಮಿಲಾಪ್" ಎಂಬ ಸಂಸ್ಥೆಯನ್ನು ಸ್ಥಾಪಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ೧೯೮೯-೯೧ರವರೆಗೆ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಫೋರ್ಡ್ ಫೌಂಡೇಶನ್ ಅರ್ಚಿವಲ್ ಯೋಜನೆಯ ಮುಖ್ಯ ಸಂಯೋಜಕರಾಗಿದ್ದರು.[೩][೪]

ಪ್ರಶಸ್ತಿಗಳು[ಬದಲಾಯಿಸಿ]

  • ೨೦೧೮ರಲ್ಲಿ ಭಾರತ ಸರ್ಕಾರದಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
  • ೨೦೧೭ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ[೫]
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವ ಪುರಸ್ಕಾರ
  • ಕರ್ನಾಟಕ ಕಲಾಶ್ರೀ:ಕರ್ನಾಟಕ ಸರ್ಕಾರ ೨೦೧೧-೨೦೧೨
  • ಗುಜರಾತ್ ಸರ್ಕಾರದಿಂದ ತಾನಾ ರಿರಿ ಪ್ರಶಸ್ತಿ[೬]
  • ೨೦೧೪ರಲ್ಲಿ ಕೇರಳ ಸರ್ಕಾರದಿಂದ ನಿಶಾಗಂಧಿ ಪುರಸ್ಕಾರ[೭]
  • ಬೆಂಗಳೂರು ಗಾಯನ ಸಮಾಜದಿಂದ ಜೀವಮಾನದ ಸಾಧನೆ ಪ್ರಶಸ್ತಿ
  • ಬಿಕೆ‍ಎಫ್ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿ

ಉಲ್ಲೇಖಗಳು[ಬದಲಾಯಿಸಿ]

  1. https://web.archive.org/web/20110615003824/http://www.itcsra.org/aspfiles/personwindow.asp?personid=223
  2. http://sunaad.org/gurus/smt-lalith-j-rao
  3. https://agragharana.wordpress.com/2008/02/14/lalith-j-rao/
  4. https://alchetron.com/Lalith-J-Rao#Partial-discography
  5. https://www.revolvy.com/page/Rajyotsava-Prashasti
  6. https://www.revolvy.com/page/Tana-and-Riri
  7. https://www.revolvy.com/page/Nishagandhi-Puraskaram
l Ms TлKkебсsvгвобeKkg H Lhкац Iiельh_oлетія,

Popular posts from this blog

Catedral de San Pablo de Londresmondiaon ecueco

Saarbrückenपादx Y: 0n2१च[सer_epoion N